ಗುರುವಾರ, ಜನವರಿ 27, 2011

ಇದು ನಾವು ಮಾಡುತ್ತಿರುವ ತಪ್ಪೇ?!

ಇದು ನಾವು ಮಾಡುತ್ತಿರುವ ತಪ್ಪೇ ..?!
ಪ್ರತಿಯೊಬ್ಬರೂ ಮತ್ತೊಬ್ಬರಿಗೋಸ್ಕರ ಬದುಕ್ತಾರೆ.ಆದರೇ ನನ್ನ ಪಾಡಿಗೆ ನಾನು ನನಗೋಸ್ಕರ ಆರಾಮಾಗಿ ಬದುಕ್ತಾ ಇದ್ದೀನಪ್ಪಾ ಅಂತ ಹೇಳಿಕೊಳ್ತಾರೆ.ನಾನು ಯಾರಿಗಾಗಿ ಬದುಕ್ತಾ ಇದ್ದೀನಿ ಅಂತ ನೋಡಿಕೊಂಡಾಗ ಅಲ್ಲಿ ಮನೆಯವರು,ಗೆಳೆಯರು,ನೆಂಟರು, ಕಲಿತ ಚಟ,ಮನದಾಳದ ಸೇಡು,ಎಂದಿನದೋ ಅವಮಾನ,ಗೊತ್ತಿಲ್ಲದೇ ಶುರುವಾದ ಅನುಮಾನ,ಎಲ್ಲಿಂದಲೋ ಬರುವ ಅಭಿಮಾನ ಯಾರೋ ಮಾಡಿದ ಸಹಾಯ,ಯಾರಿಗಾಗೋ ಮಾಡಲಿಕ್ಕೆ ಹೊರಟ ಸಹಾಯ ... ಒಟ್ಟಿನಲ್ಲಿ ಇಲ್ಲಿ ನಾವು ನಮಗೆಷ್ಟು ಬಡುಕುತ್ತಿದ್ದೇವೆ ಅನ್ನುವುದನ್ನು ಹುಡುಕಿದರೆ ... ಅಲ್ಲೆಲ್ಲಾ ಸಿಕ್ಕುವುದು ಬೇರೆಯವರು.ಆ ಬೇರೆಯವರಿಂದಲೇ ಬಂದನಗಳು ಹಾಗೂ ಬಂಧನಗಳು. ಅದರಿಂದಲೇ ನೋವು,ನಲಿವು,ಕಣ್ಣೀರು,ಕರ್ಚೀಫು ವಗೈರೆ ವಗೈರೆ. ಆದರೇ ಇದ್ಯಾವುದನ್ನೂ ಹಚ್ಚಿಕೊಳ್ಳದ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದು ಬಂದಿದ್ದೀವೆ.ಅದು ನಮಗೆ ಗೊತ್ತು.ಅದೇ ನಮ್ಮ ಬಾಲ್ಯ. ಆ ಬಾಲ್ಯದ ಗುಣವನ್ನ ಬಿಟ್ಟು ಬೆಳದದ್ದೇ ಮುಳುವಾಯಿತೇ.ಈವತ್ತೂ ಮಕ್ಕಳನ್ನ ಬೈದು ನೋಡಿ ... ಎರಡು ಸೆಕೆಂಡ್ ಸೀರಿಯಸ್ ಆಗಿ ಅವು ಮತ್ತೇ ಬಂದು ನಮ್ಮ ಬಳಿ ಆಡತೊಡಗುತ್ತವೆ.
ಮತ್ತೇ ನಾವು ನಮ್ಮಲ್ಲಿ ನಮ್ಮ ಬಾಲ್ಯವನ್ನ ಹುಡುಕ ಬೇಕಾಗಿದೆ.
ನಿಜಾ ನಾವು ತಪ್ಪು ಮಾಡಿದ್ವೀ ... ದೊಡ್ಡೋರಾಗಿಬಿಟ್ವೀ ....
ಕಾಫೀ ರಾಘವೇಂದ್ರ.


ಮಂಗಳವಾರ, ಜನವರಿ 25, 2011

ಸಾಯುವುದು ಹ್ಯಾಗೇ !?

ಸಾಯುವುದು ಹ್ಯಾಗೇ?
ಇದಕ್ಕುತ್ತರ  ಚೆನ್ನಾಗಿ ಬದುಕಿ ಬಿಡಿ ಅಂತಷ್ಟೇ.
ಹಾಗಾದರೆ  ಚೆನ್ನಾಗಿ ಬದುಕುವುದು ಹ್ಯಾಗೇ? ಬದುಕು ಬಂದ ಹಾಗೆ ತೆಗೆದುಕೊಳ್ಳುತ್ತಲೇ ಅದನ್ನ ನಾವಂದುಕೊಂಡ ಹಾಗೆ ಬರುವ ರೀತಿ ಮಾಡಿಕೊಳ್ಳುವುದು.ಇಂಥಾ ಹುಚ್ಚು ಆಲೋಚನೆಗಳ ಲಹರಿಯಲ್ಲಿ ನಿತ್ಯವೂ ಕಳೆದು ಹೋಗುವ ನಾನು ಅದನ್ನ ಒಂದೆಡೆ ಬರೆದುಕೊಳ್ಳಬೇಕು ಅನ್ನಿಸಿದಾಗಲೇ ಬ್ಲಾಗ್ ಸಿಕ್ಕಿದ್ದು.
ಇಲ್ಲಿ  ಸಿಕ್ಕಿದ್ದು ದಕ್ಕಿದ್ದು ಎಲ್ಲಾ ಇನ್ಯಾವುದೋ ಯೋಚನಾ ಲಹರಿಗೆ ಕೊಂಡಿಯಾದರೇ ಅದಕ್ಕಿಂತಲೂ ಸಂತೋಷ ಮತ್ತೇನಿದೆ. ಈವತ್ತಿನ ಅನಿಸಿಕೆ ...
ಸಂಸ್ಕೃತಿ ..... ನಡೆದು ಬಂದಿದ್ದು.
ಸಂಸ್ಕಾರ ..... ಪಡೆದು ಬಂದಿದ್ದು.
ಚಟ ... ಕಲಿತು ಬಂದಿದ್ದು.
ಹಠ ... ?
ಹೀಗೇ ಮುಂದುವರೆಯೋಣ ....
ಕಾಫೀ ರಾಘವೇಂದ್ರ.